ಕರೆದೊಯ್ಯುವೆ ಬಾರೆ
ದಿವ್ಯ ಪಯಣಕೆ ನಿನ್ನ
ಹೀಗೇಕೆ ನಿಧಾನ
ಅವಸರಿಸು ಬಾ
ಬೆನ್ನು ಬಾಗಿದೆ ಇಂದು
ಬದುಕ ಹೊರೆಯನು ಹೊತ್ತು
ಸಾಗುವದು ಬಹಳವಿದೆ
ಅನುಸರಿಸಿ ಬಾ
ಬಾಳ ಹಾದಿಯಲಿಂದು
ಎಷ್ಟೊಂದು ಮಜಲುಗಳು
ಸೋತು ಹೋದೆಯ ನಲ್ಲೆ
ಕಸುವಿಲ್ಲವೆ?
ಹೆದರದಿರು ಬೆದರದಿರು
ಕುಗ್ಗಿ ನೀ ನಿಲ್ಲದಿರು
ಕೈ ಹಿಡಿದು ನಡೆಸಲು
ನಾನಿಲ್ಲವೆ?
ಛಳಿ ಬಿಸಿಲು ಮಳೆ ಗಾಳಿ
ಸುಖ ದುಃಖದಾಟದಲಿ
ಜೊತೆಯಲಾಡುವೆ
ಬಾರೆ ಪ್ರಾಣಸಖೀ
ತಲೆ ನೆರೆದು ಭುಜ ಬಾಗಿ
ಕಣ್ಣೋಟ ಮಂಜಾಗಿ
ಬೊಚ್ಚು ನಗೆಯಲೂ
ನೀನೆ ಚಂದ್ರಮುಖೀ
ಬಾರೆ ನೀ ಸಂಗಾತಿ
ಕನಸುಕಂಗಳ ಗೆಳತಿ
ಜಗವೆಲ್ಲ ಸುತ್ತೋಣ
ಕಣ್ಣಾಗು ಬಾ
ಉಸಿರು ನಿಲ್ಲುವ ಮುನ್ನ
ಪಯಣ ಮುಗಿಯುವ ಮುನ್ನ
ಸಾಂಗತ್ಯದಾನಂದ
ಸವಿಯೋಣ ಬಾ
....ಡಾ. ಉಷಾ ಗದ್ದಗಿಮಠ
ದಿವ್ಯ ಪಯಣಕೆ ನಿನ್ನ
ಹೀಗೇಕೆ ನಿಧಾನ
ಅವಸರಿಸು ಬಾ
ಬೆನ್ನು ಬಾಗಿದೆ ಇಂದು
ಬದುಕ ಹೊರೆಯನು ಹೊತ್ತು
ಸಾಗುವದು ಬಹಳವಿದೆ
ಅನುಸರಿಸಿ ಬಾ
ಬಾಳ ಹಾದಿಯಲಿಂದು
ಎಷ್ಟೊಂದು ಮಜಲುಗಳು
ಸೋತು ಹೋದೆಯ ನಲ್ಲೆ
ಕಸುವಿಲ್ಲವೆ?
ಹೆದರದಿರು ಬೆದರದಿರು
ಕುಗ್ಗಿ ನೀ ನಿಲ್ಲದಿರು
ಕೈ ಹಿಡಿದು ನಡೆಸಲು
ನಾನಿಲ್ಲವೆ?
ಛಳಿ ಬಿಸಿಲು ಮಳೆ ಗಾಳಿ
ಸುಖ ದುಃಖದಾಟದಲಿ
ಜೊತೆಯಲಾಡುವೆ
ಬಾರೆ ಪ್ರಾಣಸಖೀ
ತಲೆ ನೆರೆದು ಭುಜ ಬಾಗಿ
ಕಣ್ಣೋಟ ಮಂಜಾಗಿ
ಬೊಚ್ಚು ನಗೆಯಲೂ
ನೀನೆ ಚಂದ್ರಮುಖೀ
ಬಾರೆ ನೀ ಸಂಗಾತಿ
ಕನಸುಕಂಗಳ ಗೆಳತಿ
ಜಗವೆಲ್ಲ ಸುತ್ತೋಣ
ಕಣ್ಣಾಗು ಬಾ
ಉಸಿರು ನಿಲ್ಲುವ ಮುನ್ನ
ಪಯಣ ಮುಗಿಯುವ ಮುನ್ನ
ಸಾಂಗತ್ಯದಾನಂದ
ಸವಿಯೋಣ ಬಾ
....ಡಾ. ಉಷಾ ಗದ್ದಗಿಮಠ
No comments:
Post a Comment