Friday, 13 April 2018

ವಾಸ್ತವ

ಹಾರದಿರು ಮನಸೇ ಎಚ್ಚರ
ಕನಸೇ ಜೀವನವಲ್ಲ!!

ಕದಡದಿರು ತಿಳಿನೀರ
ಎದ್ದೀತು ಕೆಸರು

ಕೀಳದಿರು ಗುಲಾಬಿ
ಚುಚ್ಚೀತು ಮುಳ್ಳು

ಸತ್ಯಕ್ಕೆ ಸಾವಿಲ್ಲ
ಎನ್ನುವದೆಲ್ಲ ಸುಳ್ಳು

ಓಡದಿರು ಹುಷಾರು
ಜಾರೀತು ದಾರಿ

ಹಿಡಿಯದಿರು ಪತಂಗ
ಹೋದೀತು ಹಾರಿ

ದಿನಕೊಂದು ಬಣ್ಣ
ಕೋರೈಸಿದೆ ಕಣ್ಣ

ನಿಧಾನಿಸೊ ಮಾನವ
ಬೇರೆಯಿದೆ ವಾಸ್ತವ!!
        ...‌. ಡಾ.ಉಷಾ ಗದ್ದಗಿಮಠ

No comments:

Post a Comment