Tuesday, 10 April 2018

ಕಿರುಕತೆ -- ಕನಸು

ಕನಸು

ಸಭೆಯಲ್ಲಿ ಪ್ರಚಂಡ ಕರತಾಡನ.  ನಿರೂಪಕರ ಧ್ವನಿ ಕಿವಿ ತುಂಬಿತು."  ಈ ವರ್ಷದ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಉದಯೋನ್ಮುಖ  ಕತೆಗಾರ್ತಿ ಉಮಾ ದೇವಿಯವರ  ಕನಸು ಕಥೆಗೆ  ನೀಡಲಾಗಿದೆ.  ಶ್ರೀಮತಿಯವರಿಗೆ ಗೌರವಾನ್ವಿತ ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ......" ನವಿಲಿನ ನಡಿಗೆಯಲ್ಲಿ ವೇದಿಕೆಯೇರುತ್ತಿದ್ದಂತೆ ಮನಸ್ಸು ಹಿಂದಕ್ಕೆ ಓಡಿತು. '' ಅದೆಂತಾ ಹಾಳು ಮೂಳು ಬರಿತಿಯೆ ಕೂಸೆ, ಶಾಲೆ ಪುಸ್ತಕ ಓದು. " ಎಂದು ಆಯಿ ಮುಲಾಜಿಲ್ಲದೆ ನನ್ನ ಸಣ್ಣ ಪುಟ್ಟ ಬರಹಗಳ ನೋಟ್ ಬುಕ್ ಅನ್ನು ಕಸಿದು ತಿಂಡಿ ‌ತಿನ್ನಲು ಬಳಸಿದಾಗಲೇ  ಲೇಖಕಿಯಾಗುವ ಕನಸು ಕಮರಿತ್ತು. ಮುಂದೆ ಮದುವೆಯಾಗಿ ಮಕ್ಕಳು -ಸಂಸಾರದ ಜಂಜಾಟದ ನಡುವೆ ಒಮ್ಮೆ ಕಳಿಸಿದ ಕಿರುಗತೆ ಸಂಪಾದಕರಿಂದ ವಾಪಸ್ ಬಂದಾಗ " It is not your cup of tea " ಯಜಮಾನರೆಂದಿದ್ದು ಅಸಹನೀಯವನಿಸಿತ್ತು. ಇತ್ತೀಚೆಗೆ ತುಕ್ಕು ಹಿಡಿದ ಮನಸ್ಸನ್ನು ತಿಳಿಗೊಳಿಸಲು ಲೇಖಕಿಯರ ಸಂಘಕ್ಕೆ ಸೇರಿಕೊಂಡಾಗಿನಿಂದ ಕನಸು ಗರಿಗೆದರಿತ್ತು. ಗೆಳತಿಯರ ಒತ್ತಾಸೆಯಿಂದ ಕಥೆ ಬರೆದು ಕಳುಹಿಸಿಯೇ ಬಿಟ್ಟಿದ್ದೆ.  ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ಮೈಕ್ ಎದುರಿಗೆ ನಿಂತಾಗ ಹೃದಯ ತುಂಬಿ ಬಂದಿತ್ತು....  ಕನಸುಗಳೆಂದೂ ಸಾಯುವದಿಲ್ಲ. ಕನಸುಗಳಿಗೆ ಕೊನೆಯಿಲ್ಲ......‌ನನ್ನ ಮಾತು ಸಾಗುತ್ತಿದ್ದಂತೆ ಚಪ್ಪಾಳೆಯ ಸುರಿಮಳೆ........ಡಾ. ಉಷಾ ಗದ್ದಗಿಮಠ

No comments:

Post a Comment