Monday, 2 April 2018

ಕವಿತೆ

ಎದೆಯ ಗೂಡಿನಲ್ಲಿ ಭಾವನೆಗಳ ದೀಪ
ಹೇಗೆ ಬಣ್ಣಿಸಲೆ ಕವಿತೆ ನಿನ್ನಯ ರೂಪ

ವಿರಹಿಗಳಿಗೆ ನೀನು ನೆನಪುಗಳ ಭಾರ
ಶಬ್ಧಗಳ ಹಾರ ಪಂಡಿತೋತ್ತಮರಿಗೆ

ಪ್ರೇಮಿಗಳಿಗೆ ನೀನೆ ಪ್ರೀತಿಯ ಮಾಲೆ
ಉಪಮೆಗಳ ಸಾಲು ಕವಿ ಪುಂಗವರಿಗೆ

ವಿಚಾರವಂತರಿಗೆ ನೀನೆ ತಾರ್ಕಿಕ ಶಕ್ತಿ
ನೀನೆ ಭಕ್ತಿಯು ಅನುಭಾವಿಗಳಿಗೆ

ಕಲ್ಪನೆಯ ಓಟ ನೀ ಕಾವ್ಯರಸಿಕರಿಗೆ
ಸಹೃದಯರಿಗೆ ನೀನೆ ರಸದೂಟವು

ಮನವ ತುಂಬಿದೆ ಇಂದು
ಕಾವ್ಯ ಕನ್ನಿಕೆಯ ಗುಂಗು
ಆಹಾ! ಎಂಥಾ ಸೊಗಸು
ಈ ಕವಿತೆಯಾ ರಂಗು!!

                ಉಷಾ ಗದ್ದಗಿಮಠ

No comments:

Post a Comment