Tuesday, 10 April 2018

ಭಾವಯಾನ

ಸ್ವಪ್ನಗಳ ಲೋಕದಲಿ
ಭಾವಗಳ ಯಾನ
ಗ್ಯಾಸ್ ಮುಂದೆ ನಿಂತಿದ್ದೆ
ಎಲ್ಲಿಯೋ ಇತ್ತು ಧ್ಯಾನ

ಸುತ್ತಾಡಲು ಹೊರಟಿದ್ದೆ 
ಮೋದೀಜಿಯೊಡನೆ ಡೆಲ್ಲಿ
ವಿಧಿಯಿಲ್ಲ ಕಟ್ಟಲೇಬೇಕಾಯ್ತು
ತೆರಿಗೆಯನು ಅಲ್ಲಿ

ಸಂಭ್ರಮದಿ ಓಡಿಸಿದೆ
ಹೊಸ ಕಾರನು ಗಲ್ಲಿ ಗಲ್ಲಿ
ಪೋಲಿಸಪ್ಪ ಗದರಿದ
ಮೇಡಂ ಲೈಸೆನ್ಸ್ ಎಲ್ಲಿ?

ಕೋಟ್ಯಾಧಿಪತಿ ಆಟದಲಿ
ಆಗಲಿದ್ದೆ ಮಸ್ತ್ ಶೈನ್
ಮೊದಲನೇ ಪ್ರಶ್ನೆಗೇ
ಬೇಕಾಯ್ತು ಲೈಫ್ ಲೈನ್

ಸೌಂದರ್ಯ ಸ್ಪರ್ಧೆಗೆ
ತಯ್ಯಾರಿಯೋ ತಯ್ಯಾರಿ
ಪ್ರಶಸ್ತಿ ಗೆದ್ದಳು
ಯಾವಳೋ ವೈಯ್ಯಾರಿ

ತಡೆಯಿಲ್ಲದೆ ಸಾಗಿತ್ತು
ಕಲ್ಪನೆಯ ತೇರು
ಮಗಳ ಧ್ವನಿ ಕೇಳಿಸಿತು
ಅಮ್ಮಾ ಆಯ್ತಾ ಸಾರು?
               ಡಾ.ಉಷಾ ಗದ್ದಗಿಮಠ                      

4 comments:

  1. ದಿನದಿನವೂ ಉಷಾಕಿರಣ ಬೆಳಗುತ್ತಿರಲಿ

    ReplyDelete
    Replies
    1. ಧನ್ಯವಾದಗಳು ಅರುಣ

      Delete
  2. ಪ್ರತಿ ಬೆಳಗಿನಲ್ಲೂ ಹೊಸ ಹೊಸ ಉಷಾಕಿರಣ
    ಬೀಳುತ್ತ ಇರಲಿಲ್ಲಿ.

    ReplyDelete